ಪಗೋಡಾ ಚಲಾವಣೆಯ ಒಂದು ಏಕಮಾನವಾಗಿತ್ತು. ಈ ನಾಣ್ಯವನ್ನು ಚಿನ್ನ ಅಥವಾ ಅರ್ಧ ಚಿನ್ನದಿಂದ ತಯಾರಿಸಲಾಗುತ್ತಿತ್ತು. ಭಾರತೀಯ ರಾಜವಂಶಗಳು, ಜೊತೆಗೆ ಬ್ರಿಟಿಷರು, ಫ಼್ರೆಂಚರು ಮತ್ತು ಡಚ್ಚರು ಈ ನಾಣ್ಯವನ್ನು ಟಂಕಿಸುತ್ತಿದ್ದರು. ಇದನ್ನು ೪೨ ಫಣಮ್‍ಗಳಾಗಿ ವಿಭಜಿಸಲಾಗಿತ್ತು. ಮಧ್ಯಯುಗದ ದಕ್ಷಿಣ ಭಾರತದಲ್ಲಿನ ವಿವಿಧ ರಾಜವಂಶಗಳು ಪಗೋಡಾ ನಾಣ್ಯಗಳನ್ನು ಹೊರಡಿಸಿದ್ದವು. ಇವುಗಳಲ್ಲಿ ಹಾನಗಲ್ಲಿನ ಕದಂಬರು, ಗೋವಾದ ಕದಂಬರು, ಮತ್ತು ವಿಜಯನಗರ ಸಾಮ್ರಾಜ್ಯ ಸೇರಿವೆ. ವಿದೇಶಿ ವ್ಯಾಪಾರಿಗಳು ಟಂಕಿಸಿದ ಪಗೋಡಾಗಳಲ್ಲಿ ಎರಡು ಪ್ರಕಾರಗಳಿದ್ದವು: ನಕ್ಷತ್ರ ಪಗೋಡಾ ಅತ್ಯಂತ ಬೆಲೆಬಾಳುವಂಥದ್ದಾಗಿತ್ತು, ೧೦೦ ಪಗೋಡಾಗಳು ೩೫೦ ರೂಪಾಯಿಗಳಷ್ಟು ಬೆಲೆಬಾಳುತ್ತಿದ್ದವು. ಇವನ್ನು ಮದ್ರಾಸಿನಲ್ಲಿ ಈಸ್ಟ್‌ ಇಂಡಿಯ ಕಂಪನಿ ಹೊರಡಿಸಿತ್ತು. ಪೋರ್ಟೊ ನೋವೊ ಪಗೋಡಾ ಎರಡನೆ ಬಗೆಯದು. ಇದನ್ನು ಟ್ಯೂಟಿಕಾರಿನ್‍ನಲ್ಲಿ ಡಚ್ಚರು ಮತ್ತು ಆರ್ಕಟ್‍ನ ನವಾಬರು ಕೂಡ ಹೊರಡಿಸಿದ್ದರು. ಇದು ನಕ್ಷತ್ರ ಪಗೋಡಾಕ್ಕಿಂತ ಶೇಕಡ ೨೫ ರಷ್ಟು ಕಡಿಮೆ ಬೆಲೆಬಾಳುತ್ತಿತ್ತು. == ಉಲ್ಲೇಖಗಳು ==